Is this you? As a journalist, you can create a free Muck Rack account to customize your profile, list your contact preferences, and upload a portfolio of your best work.
Claim your profile
Articles by Mohammad Irshad
EEG blink and gaze control using random forest classification for accessible assistive robotic navigation in real world conditions
Abstract This study presents an EEG-based Brain–Computer Interface for intuitive robotic navigation driven by ocular activity. A real multi-subject dataset collected from 15 participants was used to extract blink- and gaze related EEG features for five control commands.
ನಾಯಕತ್ವ ಗೊಂದಲದ ನಡುವೆ ಕುತೂಹಲ ಕೆರಳಿಸಿದೆ ಖಾಸಗಿ ಹೋಟೆಲ್ ನಲ್ಲಿ ಡಿಕೆಶಿ ಆಪ್ತರ ಗ್ರೂಪ್ ಫೋಟೋ!
Authored by: ಇರ್ಷಾದ್ ಉಪ್ಪಿನಂಗಡಿ•Edited by: ವರ್ಷ ಯು |Vijaya Karnataka Web•27 Feb 2026, 11:50 am IST ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕರು ಫಾರಿನ್ ಟ್ರಿಪ್ ನೆಪದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು. ಸದ್ಯ ಈ ಬೆನ್ನಲ್ಲೆ, ಡಿಕೆ ಬಣವೂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಶಾಸಕ ಎಚ್ ಸಿ ಬಾಲಕೃಷ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಡಿಕೆ ಬಣದಲ್ಲಿ ಗುರುತಿಸಿಕೊಂಡಿರುವ 48 ಶಾಸಕರು ಒಟ್ಟಿಗೆ ಸೇರಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.
ರಾಜ್ಯದಲ್ಲಿ ಕಲುಷಿತ ನೀರಿನ ಅಪಾಯ: ಈ ವರ್ಷ 2.46 ಲಕ್ಷ ನೀರಿನ ಮಾದರಿಯಲ್ಲಿ ರಾಸಾಯನಿಕ, ಬ್ಯಾಕ್ಟೀರಿಯಾ ಪತ್ತೆ ಎಷ್ಟು?
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•26 Feb 2026, 6:39 pm IST ಈ ಬಾರಿಯ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಎಲ್ಲಾ ನೀರಿನ ಶೇಖರಣಾ ಘಟಕಗಳನ್ನು ಕಾಲ-ಕಾಲಕ್ಕೆ ಸ್ವಚ್ಛಗೊಳಿಸಲು ಮತ್ತು ಕ್ಲೋರಿನೇಷನ್ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ ಎಂದೂ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಉಪನಗರ ವರ್ತುಲ ರಸ್ತೆ: ಯೋಜನೆ ಜಾರಿ, ಭೂ ಪರಿಹಾರಕ್ಕೆ ಶೀಘ್ರದಲ್ಲೇ ಒಪ್ಪಿಗೆ: ಎಚ್ಡಿಕೆ ಮಾಹಿತಿ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•26 Feb 2026, 6:36 pm IST 2021ರಲ್ಲಿಯೇ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ವಿತರಣೆ ಪೂರ್ಣಗೊಂಡಿಲ್ಲ, ಇದು ರೈತರಿಗೆ ತೀವ್ರ ತೊಂದರೆ ಉಂಟು ಮಾಡಿದೆ. ಅಲ್ಲದೆ, ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಕೂಡ ತಮಗೆ ಪತ್ರ ಬರೆದು ಈ ಬಗ್ಗೆ ವಿನಂತಿಸಿದ್ದಾರೆ ಎಂಬ ಅಂಶವನ್ನು ಸಚಿವರು ಪ್ರಧಾನಿಗಳಿಗೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದರು. ಯೋಜನೆಯ ಅನುಷ್ಠಾನ ಮತ್ತು ಭೂ ಪರಿಹಾರ ವಿತರಣೆಯ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಪ್ರಧಾನಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ಇದೆ.
ಆರೋಗ್ಯ ಇಲಾಖೆಯಿಂದ ಉರ್ದು ಭಾಷೆಯಲ್ಲಿ ಆಹ್ವಾನ ಪತ್ರಿಕೆ ವಿವಾದ: ಸಿದ್ದರಾಮಯ್ಯ ಕೊಟ್ಟ ಸ್ಪಷ್ಟನೆ ಏನು?
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•26 Feb 2026, 6:35 pm IST ನೆಲ - ಜಲ - ಭಾಷೆಯ ಕಾಳಜಿಯ ಬಗ್ಗೆ ಬಿಜೆಪಿ ನಾಯಕರಿಂದ ಪಾಠ ಹೇಳಿಸಿಕೊಳ್ಳಬೇಕಾದ ದರಿದ್ರ ಸ್ಥಿತಿ ನಮಗೆ ಬಂದಿಲ್ಲ. ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವ ವಿಚಾರ ಬಂದಾಗ ರಾಜಕೀಯ ಬದಿಗಿಟ್ಟು, ಹೋರಾಟದ ಮೊದಲ ಸಾಲಿನಲ್ಲಿ ನಿಂತವನು ನಾನು. ಇದಕ್ಕೆ ಇತಿಹಾಸ ಸಾಕ್ಷಿ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿಯೇ ರಾಜಕೀಯ ಜೀವನಕ್ಕೆ ಕಾಲಿರಿಸಿದ ನನಗೆ ಕನ್ನಡ ಬರಿ ಭಾಷೆಯಲ್ಲ, ಬದುಕು ಹೌದು ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇಸ್ರೇಲ್ - ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಶೀಘ್ರದಲ್ಲೇ ಅಂತಿಮ ರೂಪ: ನರೇಂದ್ರ ಮೋದಿ ವಿಶ್ವಾಸ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•26 Feb 2026, 6:03 pm IST ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಣಗಾನ ಮಾಡಿದ್ದಾರೆ. ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸದ ಬಗ್ಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಮೆಚ್ಚುಗೆಯ ಮಾತನ್ನಾಡಿದ್ದಾರೆ. ಇದೊಂದು ಅದ್ಭುತ ಭೇಟಿ ಎಂದು ಬಣ್ಣಿಸಿದ್ದಾರೆ. ಈ ಭೇಟಿ ಅಲ್ಪಾವಧಿ ಆಗಿದ್ದರೂ ಫಲಪ್ರದವಾಗಿದೆ ಎಂದು ಕೊಂಡಾಡಿದ್ದಾರೆ. ಇಸ್ರೇಲ್ ಸಂಸತ್ತಿನಲ್ಲೇ ಪ್ರಧಾನಿ ಮೋದಿ ನೀಡಿರುವ ಭಾವನಾತ್ಮಕ ಹೇಳಿಕೆಯ ಬಳಿಕ ಇಸ್ರೇಲ್ ನಲ್ಲಿ ಕಣ್ಣೀರು ಹಾಕದ ಪ್ರಜೆಗಳೇ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 100ಗಡಿ ದಾಟಿದರೆ ಜಿಬಿಎಗೆ ನೋಟಿಸ್! ಈಶ್ವರ ಖಂಡ್ರೆ ಸೂಚನೆ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•26 Feb 2026, 3:18 pm IST ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ 100ಗಡಿ ದಾಟಿದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೋಟಿಸ್ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಶಾಸಕರ ಜೊತೆಗೆ ಸಭೆ ನಡೆಸಲು ಖಂಡ್ರೆ ಮುಂದಾಗಿದ್ದಾರೆ. ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳ ಸಹಕಾರವನ್ನು ಅವರು ಕೋರಿದ್ದಾರೆ. ಹಾಗಾದರೆ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಸ್ಥಿತಿಗತಿ ಹೇಗಿದೆ?
ಪಂಚ ಗ್ಯಾರಂಟಿಯಿಂದ ಆರ್ಥಿಕ ಹೊರೆ, ಡಿಕೆಶಿ ಹೇಳಿಕೆಯಿಂದ ಕಾಂಗ್ರೆಸ್ಗೆ ಮುಜುಗರ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•26 Feb 2026, 2:42 pm IST ಪಂಚ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆಯಾಗುತ್ತದೆ ಎಂಬ ಚರ್ಚೆ ಮತ್ತೆ ಶುರುವಾಗಿದೆ. ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಸಾಕಷ್ಟು ಮುಜುಗರ ಉಂಟು ಮಾಡಿದೆ. ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದರೂ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆ ಆಗುತ್ತಿರುವುದನ್ನು ಅವರು ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಗ್ಯಾರಂಟಿ ಯೋಜನೆಯ ಬಗ್ಗೆ ಕಾಂಗ್ರೆಸ್ ಶಾಸಕರು, ಸಚಿವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಮತ್ತಷ್ಟು ವಿವರ ಇಲ್ಲಿದೆ.
ಯುವಜನರ ಉದ್ಯೋಗ ಸಮರ: ವಿಪಕ್ಷಕ್ಕೆ ಸಿಕ್ಕಿತು ಅಸ್ತ್ರ, ಇಕ್ಕಟ್ಟಿನಲ್ಲಿ ಸರ್ಕಾರ; ಸಂಪುಟ ಸಭೆಯತ್ತ ಎಲ್ಲರ ಚಿತ್ತ
ಬೆಂಗಳೂರು: ಧಾರವಾಡದಲ್ಲಿ ಯುವ ಜನರ ಉದ್ಯೋಗ ಸಮರ ತೀವ್ರಗೊಂಡಿದೆ. ಸರ್ಕಾರಿ ನೇಮಕಾತಿಗೆ ಆಗ್ರಹಿಸಿ ಯುವ ಜನರು ದೊಡ್ಡ ಮಟ್ಟದಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ. ಉದ್ಯೋಗ ಸಮರ ವಿಪಕ್ಷಗಳಿಗೆ ಬಹುದೊಡ್ಡ ಅಸ್ತ್ರವಾಗಿದ್ದು, ಸರ್ಕಾರವೂ ಇಕ್ಕಟ್ಟಿಗೆ ಸಿಲುಕಿದೆ. ಈ ನಡುವೆ ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಸಂಪುಟ ಸಭೆಯಲ್ಲಿ ಈ ಕುರಿತಾಗಿ ಮಹತ್ವದ ಚರ್ಚೆ ನಡೆಯಲಿದೆ. ಡಿಕೆಶಿಗೆ ಸಾಹುಕಾರ್ ಸವಾಲ್, ʻಅಹಿಂದʼ, ದಲಿತಾಸ್ತ್ರ ಉರುಳಿಸಿ ಸಿಎಂ ಸ್ಥಾನ ತಪ್ಪಿಸಲು ಭರ್ಜರಿ ಪ್ಲಾನ್ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.81 ಲಕ್ಷ ಉದ್ಯೋಗ ಖಾಲಿ ಇದೆ. ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ.
ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲು ತೆರಳಿದ್ದ ದೆಹಲಿ ಪೊಲೀಸರನ್ನೇ ವಶಕ್ಕೆ ಪಡೆದ ಶಿಮ್ಲಾ ಖಾಕಿ!
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•26 Feb 2026, 11:02 am IST ದೆಹಲಿಯಲ್ಲಿ ನಡೆದ ಎಐ ಶೃಂಗ ಸಭೆಗೆ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿ ಅಡ್ಡಿ ಉಂಟು ಮಾಡಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಬಂಧನ ಆಗುತ್ತಿದೆ. ಈ ನಡುವೆ ಹಿಮಾಚಲ ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲು ತೆರಳಿದ್ದ ದೆಹಲಿ ಪೊಲೀಸರ ಕಾರ್ಯಾಚರಣೆಗೆ ಹಿಮಾಚಲ ಪ್ರದೇಶ ಶಿಮ್ಲಾ ಪೊಲೀಸರು ಅಡ್ಡಿ ಉಂಟು ಮಾಡಿದ್ದಾರೆ. ಇದು ಇದೀಗ ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗಿದೆ. ಹಾಗಾದರೆ ಏನಿದು ಘಟನೆ ಇಲ್ಲಿದೆ ಮಾಹಿತಿ.
ರಾಜ್ಯದಲ್ಲಿ ಅಪರೂಪದ ಖಾಯಿಲೆಗಳಿಂದ ಬಳಲುತ್ತಿರುವವರ ಜತೆ ನಿಲ್ಲಲಿದೆ ಸರ್ಕಾರ: ಡಿಕೆಶಿ ನೀಡಿದ್ದಾರೆ ಭರವಸೆ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•25 Feb 2026, 6:38 pm IST ಕರ್ನಾಟಕ ತನ್ನದೇ ಆದ ಪ್ರತಿಭಾ ಸಂಪನ್ಮೂಲವನ್ನು ಹೊಂದಿದೆ. ಇಡೀ ದೇಶದಲ್ಲಿಯೇ ಕರ್ನಾಟಕ ಅನೇಕ ಕ್ಷೇತ್ರಗಳಲ್ಲಿ ಮುಂದಿದೆ. ನಮ್ಮ ಸರ್ಕಾರವೂ ಸಹ ಯುವಕರು, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹದಾಯಕವಾಗಿ ನಿಂತಿದೆ. ಐದು ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ 5 ಸಾವಿರ ಹಣವನ್ನು ಉಳಿತಾಯ ಮಾಡುತ್ತಿದೆ. ಸರ್ಕಾರಕ್ಕೆ ಹೊರೆ ಆಗುತ್ತಿರಬಹುದು ಆದರೆ ಜನರ ಮೇಲಿರುವ ಆರ್ಥಿಕ ಒತ್ತಡ, ಮಾನಸಿಕ ಒತ್ತಡ ಕಡಿಮೆಯಾಗಬೇಕು ಎಂದು ನಾವು ಕೆಲಸ ಮಾಡುತ್ತಿದ್ದೇವೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ಸುಳ್ಳಾಟ, ಕಳ್ಳಾಟವನ್ನು ನಿಲ್ಲಿಸಲಿ: ಬಿವೈ ವಿಜಯೇಂದ್ರ ವಾಗ್ದಾಳಿ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•25 Feb 2026, 6:40 pm IST ಧಾರವಾಡದಲ್ಲಿ ರಾಜ್ಯ ವಿದ್ಯಾರ್ಥಿ ಒಕ್ಕೂಟವು ನಿನ್ನೆ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸಿದೆ. ಇವರು ಹಲವಾರು ಬಾರಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು, ಧಾರವಾಡ, ವಿಜಾಪುರ, ಬಾಗಲಕೋಟೆ, ಬೀದರ್ನಲ್ಲೂ ಹೋರಾಟ ಮಾಡಿದ್ದರು. ರಾಜ್ಯ ಸರಕಾರವು ಕುಂಭಕರ್ಣ ನಿದ್ರೆಯಲ್ಲಿ ಇರುವ ಪರಿಣಾಮವಾಗಿ ಹಾಗೂ ಯುವಜನತೆಗೆ ಉದ್ಯೋಗ ಸೃಷ್ಟಿ ವಿಷಯದಲ್ಲಿ ಇಚ್ಛಾಶಕ್ತಿ ಕೊರತೆಯ ಕಾರಣದಿಂದ ಇದನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ.
ನಾಡೋಜ ಪ್ರಶಸ್ತಿ ಬಂದರೂ ರಾಜ್ಯಪಾಲರಿಂದ ಗೌರವ ಸ್ವೀಕರಿಸದ ಜಿ ರಾಮಕೃಷ್ಣ: ಕೊಟ್ಟ ಕಾರಣವೂ ಕುತೂಹಲ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•25 Feb 2026, 4:59 pm IST ಹಿರಿಯ ಸಂಶೋಧಕ, ಲೇಖಕ ಜಿ ರಾಮಕೃಷ್ಣ ಅವರು ನಾಡೋಜ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯ ಜಿ ರಾಮಕೃಷ್ಣ ಅವರಿಗೆ ನಾಡೋಜ ಪ್ರಶಸ್ತಿಯನ್ನು ನೀಡಿದೆ. ಆದರೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಭಾಗಿಯಾಗದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗೆ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದ ಸಂದರ್ಭದಲ್ಲಿ ರಾಜ್ಯಪಾಲರಿಂದ ಜಿ ರಾಮಕೃಷ್ಣ ಅವರು ಪ್ರಶಸ್ತಿ ಪಡೆಯಲು ನಿರಾಕರಿಸಿದ್ದಾರೆ. ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ರಾಜ್ಯ ಸರ್ಕಾರದಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಖಾಲಿ: ಯಾವ ಇಲಾಖೆಗೆ ಬೇಕಿದೆ ಎಷ್ಟು ನೇಮಕಾತಿ?
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•25 Feb 2026, 4:36 pm IST ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ಈ ನಡುವೆ ನೇಮಕಾತಿಗೆ ಆಗ್ರಹಿಸಿ ಧಾರವಾಡದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ನೇಮಕಾತಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಸರ್ಕಾರಕ್ಕೆ ತಲೆನೋವು ಉಂಟು ಮಾಡಿದೆ. ಈ ನಡುವೆ 50 ಸಾವಿರ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಶಿಕ್ಷಣ, ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಮತ್ತಷ್ಟು ಮಾಹಿತಿ ಇಲ್ಲಿದೆ.
ರಾಜ್ಯ ಸರ್ಕಾರಕ್ಕೆ ತಲೆನೋವಾದ ಉದ್ಯೋಗದ ಹೋರಾಟ: ಸಂಪುಟ ಸಭೆಯಲ್ಲಿ ನಡೆಯಲಿದೆ ಚರ್ಚೆ, ಆಗುತ್ತಾ ಮಹತ್ವದ ನಿರ್ಧಾರ?
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•25 Feb 2026, 2:13 pm IST ನಾವು ಅಧಿಕಾರಕ್ಕೆ ಬಂದಾಗ, 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇದು ಒಂದೆರೆಡು ದಿನಗಳಲ್ಲಿ ಸೃಷ್ಟಿಯಾದುದಲ್ಲ; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಸೂಕ್ತ ಯೋಜನೆಯನ್ನು ರೂಪಿಸದಿರುವುದರಿಂದ ಇಷ್ಟು ದೊಡ್ಡ ಸಂಖ್ಯೆಯ ಸರ್ಕಾರಿ ಹುದ್ದೆಗಳು ಖಾಲಿಯಿದ್ದವು.
ನನ್ನ ಹಣೆಬರಹ ನನಗೆ ಗೊತ್ತಿಲ್ಲ, ಇನ್ನು ಬೇರೆಯವರು ಹೇಳೋದೇನು? ರಾಜಕೀಯ ಪದೋನ್ನತಿ ಬಗ್ಗೆ ಪ್ರಿಯಾಂಕ್ ಖರ್ಗೆ ಮಾರ್ಮಿಕ ಮಾತು
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•25 Feb 2026, 12:32 pm IST ನನ್ನ ಹಣೆಬರಹ ನನಗೆ ಗೊತ್ತಿಲ್ಲ, ಇನ್ನು ಬೇರೆಯವರು ಹೇಳೋದೇನು? ಹೀಗೆ ಪ್ರಶ್ನಿಸಿದ್ದು ಸಚಿವ ಪ್ರಿಯಾಂಕ್ ಖರ್ಗೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ರಾಜಕೀಯ ಪದೋನ್ನತಿ ಬಗ್ಗೆ ಮಾರ್ಮಿಕ ಮಾತನ್ನು ಆಡಿದರು. ನನಗೆ ರಾಜಕೀಯವಾಗಿ ಪದೋನ್ನತಿ ಸಿಗಲಿದೆ ಎಂದು ಬೇರೆ ಯಾರೂ ಹೇಳಿದರೂ ಪ್ರಯೋಜನ ಆಗುವುದಿಲ್ಲ. ಬದಲಾಗಿ ರಾಜಕೀಯ ಪದೋನ್ನತಿಯ ಬಗ್ಗೆ ಹೈಕಮಾಂಡ್ ಹೇಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಪುಟ ಪುನಾರಚನೆ ಹಾಗೂ ಇನ್ನಿತರ ವಿಚಾರವಾಗಿ ಅವರು ಮಾತನಾಡಿದ್ದಾರೆ. ವಿವರ ಇಲ್ಲದೆ.
ಕಾಂಗ್ರೆಸ್ ನಲ್ಲಿ ಸದ್ದುಮಾಡುತ್ತಿದೆ ಪತ್ರ ವ್ಯವಹಾರ: ಎಂಎಲ್ಎಗಳ ಬೆನ್ನಲ್ಲೇ ಎಂಎಲ್ ಸಿಗಳ ಸರದಿ, ಬೇಡಿಕೆ ಏನು?
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•25 Feb 2026, 12:02 pm IST ಪ್ರಸ್ತುತ ಸರ್ಕಾರದಲ್ಲಿ ವಿಧಾನಪರಿಷತ್ ಸದಸ್ಯರಿಗೆ ಐದು ಕ್ಯಾಬಿನೆಟ್ ಸ್ಥಾನಗಳನ್ನು ಒದಗಿಸುವುದು ಸೂಕ್ತವಾಗಿದೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಒಬ್ಬರು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರಗಳಿಂದ ಒಬ್ಬರು, ಕೆಳಮನೆ ಅಥವಾ ನಾಮನಿರ್ದೇಶಿತ ವರ್ಗದಿಂದ ಒಬ್ಬ ಎಂಎಲ್ಸಿಯನ್ನ ಆಯ್ಕೆ ಮಾಡಿ ಎಂದು ಹೈಕಮಾಂಡ್ಗೆ ವಿಧಾನಪರಿಷತ್ ಸದಸ್ಯರು ಮನವಿ ಮಾಡಿದ್ದಾರೆ. ಈ ಕುರಿತಾಗಿ ಅವರು ಪತ್ರವನ್ನು ಬರೆದಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ: ಪರಿಸ್ಥಿತಿ ನಿಯಂತ್ರಣದಲ್ಲಿ, ಹೆಚ್ಚುವರಿ ಪೊಲೀಸ್ ಬಂದೋಬಸ್ತ್: ಪರಮೇಶ್ವರ್ ಮಾಹಿತಿ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•25 Feb 2026, 10:49 am IST ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿಯೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಅವರ ಕ್ಯಾಂಪಸ್ ಅಲ್ಲಿ ಅದೇನೋ ಸೆಮಿನಾರ್ ಮಾಡಿದ್ದಾರೆ, ವಿಷಯ ಏನಾದರೂ ಇರಲಿ. ಪರ- ವಿರೋಧ ಇದ್ದೆ ಇರುತ್ತದೆ. ಅದಕ್ಕೆ ಒಂದು ಗುಂಪು ಹೋಗಿ ಗಲಾಟೆ ಮಾಡಿದ್ದಾರೆ. ಕಾನೂನು ಇವರೇ ಕೈಗೆ ತೆಗೆದುಕೊಂಡರೆ ಪೊಲೀಸರು ಸುಮ್ಮನೇ ಇರುವುದಿಲ್ಲ.
ಇನ್ಮುಂದೆ ಮನೆಯಲ್ಲಿ ಕುಳಿತೇ ಅರ್ಜಿ, ಏಳನೇ ದಿನಕ್ಕೆ ಖಾತೆ ಬದಲಾವಣೆ: ಜನರ ಮನೆ ಬಾಗಿಲಿಗೆ ಆಡಳಿತ ಭಾಗ್ಯ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•24 Feb 2026, 7:00 pm IST ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲೀಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪಹಣಿಯ ಜೊತೆಗೆ ಆಧಾರ್ ಜೋಡಣೆಯಾದರೆ ಪಹಣಿಯಲ್ಲಿ ಏನೇ ಬದಲಾವಣೆ ಆದರೂ ಆ ಸಂದೇಶವನ್ನು ಆಸ್ತಿ ಮಾಲೀಕರ ಮೊಬೈಲ್ಗೆ ಕಳುಹಿಸಲಾಗುತ್ತದೆ. ಆಗ ಆಸ್ತಿ ಮಾಲೀಕರ ಗಮನಕ್ಕೆ ಬಾರದೆ ನಡೆಯುವ ಖಾತೆ ಬದಲಾವಣೆ ಅಥವಾ ಮಾರಾಟವನ್ನು ತಡೆಯಬಹುದು. ಆ ಮೂಲಕ ಆಸ್ತಿ ಮಾಲೀಕತ್ವಕ್ಕೆ ಖಾತರಿ ಪಡೆಯಬಹುದು ಎಂದು ವಿವರಿಸಿದರು.
ಮಕ್ಕಳಿದ್ದೂ ಇಲ್ಲದಂತಾದ ಹಿರಿಯರ ಬಾಳು: ಒಂಟಿತನಕ್ಕೆ ನೊಂದು ರೈಲು ಹಳಿ ಮೇಲೆ ಪ್ರಾಣ ಬಿಟ್ಟ ದಂಪತಿ!
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•24 Feb 2026, 6:59 pm IST ಹೆತ್ತು ಹೊತ್ತು ಸಾಕಿದ ತಂದೆ ತಾಯಿ ತಮ್ಮ ಅಂತ್ಯ ಕಾಲದಲ್ಲಿ ಬೇಡವಾಗುತ್ತಾರೆ. ನಮ್ಮನ್ನು ಆರೈಕೆ ಮಾಡಿದ ತಂದೆ ತಾಯಿಯ ವೃದ್ದಾಪ್ಯದ ಸಂದರ್ಭದಲ್ಲಿ ಅವರನ್ನು ಆರೈಕೆ ಮಾಡಲು ಯಾರೂ ಇಲ್ಲವಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೊಂದ ಹಿರಿಜೀವಗಳು ರೈಲಿಗೆ ಅಡ್ಡ ನಿಂತು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನದಲ್ಲಿ ನಡೆದಿದೆ. ಈ ಘಟನೆ ಇದೀಗ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಾಗಿದೆ. ಹಿರಿಯ ಜೀವನಗಳ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಬಗ್ಗೆ ವಿವರ ಇಲ್ಲಿದೆ.
ಸಚಿವರು, ಶಾಸಕರನ್ನು ನಿಯಂತ್ರಿಸಬೇಕಿರುವುದು ಸಿಎಂ: ಭಿನ್ನಮತ ಶಮನ ಹೊಣೆಯನ್ನು ಸಿದ್ದು ಹೆಗಲಿಗೆ ಹಾಕಿದ ಡಿಕೆಶಿ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•24 Feb 2026, 5:15 pm IST ಪರಮೇಶ್ವರ್ ಅವರಿಗೆ ಮೊದಲು ಕೂಲಿ ಕೊಡಲಿ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ, “ಅವರು ದೊಡ್ಡವರು” ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು. ದೆಹಲಿಗೆ ಹೋಗುತ್ತೀರಾ, ಹೈಕಮಾಂಡ್ ನಾಯಕರು ಮೊದಲ ಬಾರಿಗೆ ನಿಮ್ಮನ್ನು ಕರೆಸಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದು ಕೇಳಿದಾಗ, “ಸಧ್ಯಕ್ಕೆ ನಾನು ಇಲ್ಲಿ ಕುಮಾರಕೃಪದಲ್ಲಿ ಇದ್ದೇನೆ” ಎಂದು ತಿಳಿಸಿದರು. ಬೇರೆ ಏನೆಲ್ಲಾ ವಿಚಾರವಾಗಿ ಅವರು ಮಾತನಾಡಿದ್ದಾರೆ? ಇಲ್ಲಿದೆ ಮಾಹಿತಿ.
ಮಲಯಾಳಿಗಳ ಬೇಡಿಕೆಗೆ ಕೊನೆಗೂ ಕೇಂದ್ರ ಸರ್ಕಾರ ಅಸ್ತು! ಕೇರಳ ಇನ್ಮುಂದೆ ಕೇರಳಂ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•24 Feb 2026, 4:43 pm IST ಕೇರಳದ ಜನರ ಬಹು ದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಕೇರಳದ ಅಧಿಕೃತ ಹೆಸರು ಇನ್ಮುಂದೆ ಕೇರಳಂ ಆಗಲಿದೆ. ಕೇರಳದ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರದ ಅಸ್ತು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿಟ್ಟಿನಲ್ಲಿ ಒಪ್ಪಿಗೆ ನೀಡಲಾಗಿದೆ. ಕೇರಳದ ವಿಧಾಸಭೆಯಲ್ಲಿ ಈ ಕುರಿತಾಗಿ ನಿರ್ಣಯ ಮಂಡಿಸಲಾಗಿತ್ತು. ಈ ನಿರ್ಣಯ ಸರ್ವಾನುಮತದಿಂದ ಒಪ್ಪಿಗೆ ಪಡೆದುಕೊಂಡಿತ್ತು. ಇದೀಗ ಕೇಂದ್ರ ಸಚಿವ ಸಂಪುಟದ ಕೂಡಾ ಹೆಸರು ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ.
ಸದನದಲ್ಲಿ ಅಬ್ಬರಿಸಿದ್ದ ಮುನಿರತ್ನ ಇದೀಗ ಕೂಲ್ : ಡಿಕೆಶಿ ಸರ್ಕಾರಿ ನಿವಾಸಕ್ಕೆ ಬಂದು ಮಾತುಕತೆ, ಶಾಸಕನ ಬೆನ್ನು ತಟ್ಟಿದ ಡಿಸಿಎಂ!
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•24 Feb 2026, 3:09 pm IST ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಭೇಟಿ ಮಾಡಿ ಮಾತುಕತೆ ನಡೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಕೆ ಸಹೋದರರು ಮತ್ತು ಮುನಿರತ್ನ ನಾಯ್ಡು ನಡುವಿನ ಕಿತ್ತಾಟ ಸುದ್ದಿ, ಸದ್ದು ಮಾಡಿತ್ತು. ಸದನದಲ್ಲೇ ಡಿಕೆಶಿ ವಿರುದ್ಧ ಮುನಿರತ್ನ ಆರೋಪ ಮಾಡಿದ್ದರು. ಡಿಕೆಶಿ ಕೂಡಾ ಇದಕ್ಕೆ ತಿರುಗೇಟು ನೀಡಿದ್ದರು. ಈ ನಡುವೆ ಕ್ಷೇತ್ರದ ವಿಚಾರವಾಗಿ ಮಾತುಕತೆ ನಡೆಸಲು ಡಿಕೆಶಿ ಅವರ ಸರ್ಕಾರಿ ನಿವಾಸಕ್ಕೆ ಮುನಿರತ್ನ ಆಗಮಿಸಿದ್ದಾರೆ.
ಡಿಕೆಶಿ ವಿರುದ್ಧ ಚಕ್ರವ್ಯೂಹ! ದಲಿತಾಸ್ತ್ರ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•24 Feb 2026, 2:13 pm IST ರಾಜ್ಯದಲ್ಲಿ ನಾಯಕತ್ವ ಕಿತ್ತಾಟ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ದೆಹಲಿಯಲ್ಲಿ ಡಿಕೆ ಶಿವಕುಮಾರ್ ಸರಣಿ ಭೇಟಿ ಮತ್ತು ಮಾತುಕತೆ ಸಂಚಲನ ಮೂಡಿಸಿದೆ. ಈ ನಡುವೆ ಸಿದ್ದರಾಮಯ್ಯ ಬಣ ಕೈಕಟ್ಟಿ ಕುಳಿತುಕೊಳ್ಳದೆ ಅಖಾಡಕ್ಕೆ ಇಳಿದಿದೆ. ಡಿಕೆ ಶಿವಕುಮಾರ್ ಉರುಳಿಸುತ್ತಿರುವ ಸಿಎಂ ದಾಳಕ್ಕೆ ಪ್ರತ್ಯುತ್ತರವಾಗಿ ದಲಿತ ಸಿಎಂ ವಿಚಾರವನ್ನು ಮತ್ತಷ್ಟು ಮುನ್ನಲೆಗೆ ತರುತ್ತಿದೆ. ಈ ಮೂಲಕ ಡಿಕೆಶಿ ವಿರುದ್ಧ ಚಕ್ರವ್ಯೂಹ ಹೂಡಲು ಸಿದ್ದರಾಮಯ್ಯ ಬಣ ಎಲ್ಲಾ ಸಿದ್ದತೆ ನಡೆಸುತ್ತಿದೆ.
ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿಗೆ ಅಹಿಂದ ನಾಯಕತ್ವ ವಹಿಸಲು ಮುಂದೆಜ್ಜೆ ; ತೆರೆಮರೆಯಲ್ಲಿ ನಡೆಯುತ್ತಿದೆ ಪ್ಲ್ಯಾನ್
Authored by: ಇರ್ಷಾದ್ ಉಪ್ಪಿನಂಗಡಿ•Edited by: ಶ್ರೀಲಕ್ಷ್ಮೀ ಎಚ್ಎಲ್|Vijaya Karnataka Web•24 Feb 2026, 12:23 pm IST ರಾಜ್ಯದಲ್ಲಿ ಅಹಿಂದ ನಾಯಕತ್ವಕ್ಕಾಗಿ ತೆರೆಮರೆಯಲ್ಲಿ ಕಸರತ್ತು ಜೋರಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕತ್ವ ಯಾರ ಕೈಯಲ್ಲಿ? ಎಂಬ ಪ್ರಶ್ನೆ ಎದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ - ಸತೀಶ್ ಜಾರಕಿಹೊಳಿ ಭೇಟಿ ವೇಳೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಹಿಂದ ನಾಯಕತ್ವಕ್ಕಾಗಿ ತೆರೆಮರೆಯಲ್ಲಿ ಕಸರತ್ತು ತೀವ್ರ ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕತ್ವ ಯಾರ ಕೈಯಲ್ಲಿ?
ದಳಕ್ಕೆ ಬಲ ತುಂಬಲು ಸಕ್ರಿಯಗೊಂಡ ನಿಖಿಲ್ ಕುಮಾರಸ್ವಾಮಿ: 2028 ರ ಚುನಾವಣೆಯಲ್ಲಿ 40 ರಿಂದ 50 ಸ್ಥಾನ ಗೆಲ್ಲೋ ಟಾರ್ಗೆಟ್!
Authored by: ಇರ್ಷಾದ್ ಉಪ್ಪಿನಂಗಡಿ•Edited by: ವರ್ಷ ಯು |Vijaya Karnataka Web•24 Feb 2026, 12:06 pm IST ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯಬಾಕಿ ಇದೆ. ಆದರೆ,2028ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ 40-50 ಕ್ಷೇತ್ರಗಳಲ್ಲಿ ಗೆದ್ದು ತಮ್ಮ ಪ್ರಾಬಲ್ಯವನ್ನು ಸಾಧಿಸುವ ಮೂಲಕ ಕಿಂಗ್ ಮೇಕರ್ ಆಗಿ ಹೊರಹೊಮ್ಮಲು ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದೆ.
ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನವೇ ರಾಜಕೀಯ ಕೊನೆ ಎಂದ ಪ್ರಿಯಾಂಕ್, ಕೆಣಕಿದರೆ ಸುಮ್ಮನಿರಲ್ಲ ಎಂದ ಛಲವಾದಿ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•23 Feb 2026, 8:40 pm IST ಪ್ರಿಯಾಂಕ್ ಖರ್ಗೆ ಅವರಿಗೆ ಮಾಡೋದಿಕ್ಕೆ ಬೇರೆ ಏನೂ ಕೆಲಸವಿಲ್ಲ. ಅವರು ಕೇವಲ ಸಚಿವರು ಎಂಬ ಗೌರವ ಬಿಟ್ಟರೆ ಸಮಾಜದಲ್ಲಿ ಬೇರೆನೂ ಇಲ್ಲ. ಅವರು ದಲಿತರ ಪರ ಹೋರಾಡಿಯೇ ಇಲ್ಲ. ದಲಿತತ್ವ ಅವರಲ್ಲಿ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುತ್ತಾರೆ ಹೊರತು ದಲಿತತ್ವ ಅವರ ಕುಟುಂಬದಲ್ಲಿ ಇಲ್ಲ ಎಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಹೇಳಿದ್ದರು. ಅಲ್ಲದೆ, ಪ್ರಿಯಾಂಕ್ ಖರ್ಗೆ ಅವರು ರಾಜಕಾರಣಿಯೇ ಅಲ್ಲ. ಅಪ್ಪನ ನೆರಳಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ಬದ್ಧತೆಯೂ ಇಲ್ಲ.
3.25 ಲಕ್ಷ ಕೋಟಿ ದಾಟಿದ ರಾಜ್ಯದ ಜೈವಿಕ ಆರ್ಥಿಕತೆ: 2025ರ ವರದಿಯಲ್ಲಿರುವ ಹೈಲೈಟ್ಸ್ ಏನೇನು?
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•23 Feb 2026, 8:20 pm IST ಜನವರಿ 2024 ಮತ್ತು ಅಕ್ಟೋಬರ್ 2025 ರ ನಡುವಣ ಅವಧಿಯಲ್ಲಿ ರಾಜ್ಯವು ಜೈವಿಕ ಔಷಧ, ವೈದ್ಯಕೀಯ ತಂತ್ರಜ್ಞಾನ, ಕಿಣ್ವ ಆಧಾರಿತ ಕೈಗಾರಿಕೆಗಳು (ಫರ್ಮಂಟೇಷನ್), ಡಿಜಿಟಲ್ ಆರೋಗ್ಯ, ಜೈವಿಕ ಕೃಷಿ ವಲಯಗಳು ಸೇರಿದಂತೆ ಸೇರಿದಂತೆ ಸುಮಾರು 40 ಒಪ್ಪಂದಗಳಲ್ಲಿ 1.14 ಶತಕೋಟಿ ಡಾಲರ್ ಮೊತ್ತದ ಬಂಡವಾಳ ಆಕರ್ಷಿಸಿದೆ. ಇದು ರಾಜ್ಯದ ಜೈವಿಕ ಉತ್ಪಾದನೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಹೂಡಿಕೆದಾರರ ಹೆಚ್ಚುತ್ತಿರುವ ವಿಶ್ವಾಸವನ್ನು ಸೂಚಿಸುತ್ತದೆ.
ಅವರು ನಮ್ಮ ರಾಷ್ಟ್ರೀಯ ನಾಯಕರು, ಇಲ್ಲಿಂದಲೇ ನಮಸ್ಕಾರ: ಎಚ್ ಸಿ ಮಹದೇವಪ್ಪಗೆ ವ್ಯಂಗ್ಯ ತಿರುಗೇಟು
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•23 Feb 2026, 7:50 pm IST ನೋಟಿನ ಮೇಲಿರುವ ಗಾಂಧಿ ಫೋಟೋವನ್ನು ತೆಗೆದು ನಿಮ್ಮ ಫೋಟೋ ಹಾಕಿಕೊಳ್ಳುವಂತೆ ನಾನು ಸವಾಲು ಹಾಕಿದೆ. ನಮ್ಮ ಪಕ್ಷ ಹಾಗೂ ಸರ್ಕಾರ ಚರ್ಚೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಹೆಸರಿಡಲು ತೀರ್ಮಾನಿಸಿದ್ದೇವೆ. ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ. ದೇಶದ ಬಡವರು, ಕೂಲಿ ಕಾರ್ಮಿಕರ ಕಾರ್ಯಕ್ರಮ. ಗ್ರಾಮೀಣ ಭಾಗದ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ.
ಸಚಿವ ಸಂಪುಟ ಪುನಾರಚನೆಗೆ 31 ಶಾಸಕರ ಒತ್ತಾಯ: ಹೈಕಮಾಂಡ್ಗೆ ಬರೆದ ಪತ್ರದಲ್ಲಿ ಏನಿದೆ?
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•23 Feb 2026, 5:53 pm IST ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಸಚಿವ ಸಂಪುಟ ಪುನಾರಚನೆಗೆ 31 ಶಾಸಕರ ಒತ್ತಾಯ ಮಾಡಿ ಹೈಕಮಾಂಡ್ ನಾಯಕರಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಹೊಸತಾಗಿ ಆಯ್ಕೆಗೊಂಡ ಶಾಸಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. 2028 ವಿಧಾನಸಭಾ ಚುನಾವಣೆಯ ದೃಷ್ಟಿಯಿಂದಲೂ ಇದು ಅಗತ್ಯ ಎಂದು ಪ್ರತಿಪಾಧಿಸಿದ್ದಾರೆ. ಪತ್ರದಲ್ಲಿ 31 ಶಾಸಕರ ಹೆಸರು ಇಲ್ಲ, ಬದಲಾಗಿ ಸಹಿ ಇದೆ. ಈ ಪತ್ರ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಹಾಗಾದರೆ ಶಾಸಕರು ಬರೆದ ಪತ್ರದಲ್ಲಿ ಏನಿದೆ?
ಸಫಾರಿ ಆರಂಭದ ಬೆನ್ನಲ್ಲೇ ಅಧಿಕಾರಿಗಳಿಗೆ ಈಶ್ವರ್ ಖಂಡ್ರೆ ಖಡಕ್ ಸೂಚನೆ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕ್ರಮ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•23 Feb 2026, 4:48 pm IST ಬಂಡೀಪುರ ಮತ್ತು ನಾಗರಹೊಳೆ ಸಫಾರಿ ಆರಂಭಗೊಂಡ ಹಿನ್ನೆಲೆಯಲ್ಲಿ ಸ್ಥಳೀಯರಿಂದ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದೆ. ಈ ನಡುವೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಸಫಾರಿ ಪುನರಾರಂಭದ ಬೆನ್ನಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಸಫಾರಿಗೆ ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪ್ರತಿಭಟನೆಯನ್ನು ನಡೆಸಿದ್ದರು.
ಅಮೆರಿಕಾ, ಇರಾನ್ ನಡುವೆ ಉದ್ವಿಗ್ನತೆ: ರಾಯಭಾರಿ ಕಚೇರಿಯಿಂದ ಭಾರತೀಯ ನಾಗರಿಕರಿಗೆ ತುರ್ತು ಎಚ್ಚರಿಕೆ ರವಾನೆ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•23 Feb 2026, 3:00 pm IST ಅಮೆರಿಕಾ ಹಾಗೂ ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಿದೆ. ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಭಾರತೀಯ ನಾಗರಿಕರಿಗೆ ತುರ್ತು ಎಚ್ಚರಿಕೆ ರವಾನೆ ಮಾಡಲಾಗಿದೆ. ಯಾರೆಲ್ಲಾ ರಾಯಭಾರಿ ಕಚೇರಿಯಲ್ಲಿ ನೋಂದಾಯಿಸಿಕೊಂಡಿಲ್ಲ ಅವರು ಕೂಡಲೇ ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಆದಷ್ಟು ಬೇರೆ ದೇಶ ತೊರೆಯುವಂತೆಯೂ ಸೂಚಿಸಲಾಗಿದೆ.
ರಂಝಾನ್, ಹೋಳಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ: ಪೊಲೀಸ್ ಪಡೆಗೆ ಪರಮೇಶ್ವರ್ ಕೊಟ್ಟಿದ್ದಾರೆ ಮಹತ್ವದ ಸೂಚನೆ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•23 Feb 2026, 2:06 pm IST ಬಾಗಲಕೋಟೆಯಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ನಡುಗೆ ರಂಝಾನ್ ಹಬ್ಬ ಮತ್ತು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸರ್ಕಾರ ಮುಂದಾಗಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಈ ಕುರಿತಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೆ ಯಾರೂ ಕಾನೂನು ಕೈಗೆತ್ತಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮತ್ತಷ್ಟು ವಿವರ ಇಲ್ಲಿದೆ.
ದಲಿತ ಸಿಎಂ ಬೇಡಿಕೆಯ ನಡುವೆ ಎಚ್ ಡಿ ಕೆಯನ್ನು ಭೇಟಿಯಾದ ಪರಮೇಶ್ವರ್: ಕುತೂಹಲ ಕೆರಳಿಸಿದ ಮಾತುಕತೆ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•23 Feb 2026, 1:02 pm IST ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ದಲಿತ ಸಿಎಂ ಕೂಗಿನ ನಡುವೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭೇಟಿ ಮತ್ತು ಮಾತುಕತೆ ನಡೆದಿದೆ. ಸದ್ಯದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಭೇಟಿ ಮತ್ತು ಮಾತುಕತೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ ಭೇಟಿಯ ಉದ್ದೇಶ ಏನು? ಉಭಯ ನಾಯಕರ ನಡುವೆ ನಡೆದ ಮಾತುಕತೆಗಳೇನು? ಇಲ್ಲಿದೆ ಮಾಹಿತಿ.
ಬಾಗಲಕೋಟೆ ಸಂಘರ್ಷ: ಚಿತಾವಣೆ ಮಾಡಿದವರಿಗೆ ಶಿಕ್ಷೆ ಆಗಬೇಕು, ಹಿಂದೂಗಳ ಮೇಲಿನ ದಬ್ಬಾಳಿಕೆ ಸಹಿಸಲಾಗದು: ಛಲವಾದಿ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•21 Feb 2026, 7:55 pm IST ಈ ದೇಶ ಮುಂದುವರೆಯುವುದು, ಉತ್ತಮವಾಗಿ ಉನ್ನತ ಮಟ್ಟಕ್ಕೆ ಬರುವುದು ಕಾಂಗ್ರೆಸ್ಸಿಗೆ ಇಷ್ಟ ಇಲ್ಲ. ಅದೇ ಕಾರಣಕ್ಕೆ ಕಾಂಗ್ರೆಸ್ಸಿನ ಕೆಲವು ಗುಲಾಮರನ್ನು ಎಐ ಶೃಂಗಸಭೆಯಲ್ಲಿ ವಿರೋಧ ಮಾಡಲು ಕಳಿಸಿದ್ದು, ಅವರು ಒಳಗೆ ಬಂದು ಅದನ್ನು ಅಡ್ಡಿಪಡಿಸಲು ಮುಂದಾಗಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ. ಇದು ದೇಶವಿರೋಧಿ ನಡೆ ಎಂದು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಎಐ ಶೃಂಗಸಭೆಯ ಮೂಲಕ ಭಾರತದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ನುಡಿದರು.
ದೆಹಲಿಗೆ ಕಾಂಗ್ರೆಸ್ ದಲಿತ ನಾಯಕರ ಪರೇಡ್: ನಾಯಕತ್ವ ಬದಲಾವಣೆ ಗೊಂದಲಕ್ಕೆ ಅಂತ್ಯ ಹಾಡಲು ಹೈಕಮಾಂಡ್ಗೆ ಒತ್ತಾಯ
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಾಗಿ ನಡೆಯುತ್ತಿರುವ ಚರ್ಚೆಗಳ ನಡುವೆ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಸಚಿವರು ಹಾಗೂ ಶಾಸಕರು ದೆಹಲಿಗೆ ಪರೇಡ್ ಮಾಡಿದ್ದಾರೆ. ಸಚಿವರಾದ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಕೆ ಎನ್ ರಾಜಣ್ಣ ಹಾಗೂ ಶಾಸಕರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕರ್ನಾಟಕ ಬಜೆಟ್ಗೆ ಮುಹೂರ್ತ ಫಿಕ್ಸ್, ಸವಾಲುಗಳ ಮಧ್ಯೆ ಸಿದ್ದರಾಮಯ್ಯ ದಾಖಲೆ ಬಜೆಟ್ ಖರ್ಗೆ ಅವರನ್ನು ಭೇಟಿ ಮಾಡಿದ ತಂಡದಲ್ಲಿ ಸತೀಶ್ ಜಾರಕಿಹೊಳಿ, ಕೆ ಎನ್ ರಾಜಣ್ಣ, ಶಾಸಕರಾದ ಬಸಂತಪ್ಪ, ಕೋನರೆಡ್ಡಿ ಇದ್ದರು.
ಶಾಲಿನಿ ರಜನೀಶ್ ವಿರುದ್ಧ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ದಿಢೀರ್ ಉಲ್ಟಾ! ಕ್ಷಮೆ ಕೇಳಿದ ಸಾಮಾಜಿಕ ಕಾರ್ಯಕರ್ತ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•21 Feb 2026, 6:16 pm IST ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಅವರು ಇದೀಗ ದಿಢೀರ್ ಉಲ್ಟಾ ಹೊಡೆದಿದ್ದಾರೆ. ಸಿಸಿಬಿ ವಿಚಾರಣೆ ಮುಗಿಸಿ ಹೊರ ಬಂದ ಬೆನ್ನಲ್ಲೇ ಮಾಧ್ಯಮಗಳ ಮುಂದೆ ಅವರು ಶಾಲಿನಿ ರಜನೀಶ್ ಅವರಲ್ಲಿ ಕ್ಷಮೆ ಕೇಳಿದ್ದಾರೆ. ಶಾಲಿನಿ ರಜನೀಶ್ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ. ಆದರೆ ನಟೇಶ್ ವಿರುದ್ಧದ ತಮ್ಮ ಆರೋಪಕ್ಕೆ ಬದ್ದನಾಗಿರುವುದಾಗಿ ತಿಳಿಸಿದ್ದಾರೆ. ಹಾಗಾದರೆ ಈ ಸಂಬಂಧಿಸಿದಂತೆ ಏನೆಲ್ಲಾ ಬೆಳವಣಿಗೆ ನಡೆದಿದೆ? ಮಾಹಿತಿ ಇಲ್ಲಿದೆ.
ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭ್ರಷ್ಟಾಚಾರ ತಡೆಯುವುದು ಸರ್ಕಾರದ ಆಶಯ : ಸಿದ್ದರಾಮಯ್ಯ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•21 Feb 2026, 5:25 pm IST ಈ ಎಲ್ಲ ನೇಮಕಾತಿಗಳನ್ನು ಕೌನ್ಸೆಲಿಂಗ್ ಮೂಲಕ ಮಾಡುತ್ತಿದ್ದು, ಭ್ರಷ್ಟಾಚಾರ ತಡೆಯಲು ಸಾಧ್ಯವಾಗುತ್ತಿದೆ. 5700 ಹುದ್ದೆಗಳನ್ನು ವೈದ್ಯರನ್ನು ಸೇರಿದಂತೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭ್ರಷ್ಟಾಚಾರವನ್ನು ತಡೆಯುವುದು ಸರ್ಕಾರದ ಆಶಯ. ವರ್ಗಾವಣೆ ಏಜೆಂಟ್ ಗಳ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ನೌಕರರು ಇದಕ್ಕೆ ಬಲಿಯಾಗಬಾರದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಸ್ತೆ ಕಾಮಗಾರಿ ಗುತ್ತಿಗೆ ನೀಡಲು ₹5 ಲಕ್ಷ ಲಂಚ ಸ್ವೀಕಾರ: ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•21 Feb 2026, 3:50 pm IST ಗುತ್ತಿಗೆದಾರರರೊಬ್ಬರಿಂದ ಲಂಚ ಸ್ವೀಕಾರ ಮಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಗುತ್ತಿಗೆದಾರ ವಿಜಯ್ ಎಂಬುವವರಿಂದ ಶಾಸಕರು ಐದು ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಇದನ್ನು ನೀಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ. ಮತ್ತಷ್ಟು ವಿವರ ಇಲ್ಲಿದೆ.
ಎಂಸಿ ಸುಧಾಕರ್ಗೆ ಮುಜುಗರ ತಂದ ವೈರಲ್ ಆಡಿಯೋ: ವಿರೋಧಿ ಬಣಕ್ಕೆ ಅಸ್ತ್ರ, ಸಚಿವರ ಪರ ಆಪ್ತರ ಬ್ಯಾಟಿಂಗ್
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•21 Feb 2026, 2:24 pm IST ಸಚಿವ ಎಂಸಿ ಸುಧಾಕರ್ ಅವರದ್ದು ಎನ್ನಲಾಗಿರುವ ಆಡಿಯೋ ಒಂದು ವೈರಲ್ ಆಗುತ್ತಿದೆ. ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಮುಖಂಡರೊಬ್ಬರ ಜೊತೆಗೆ ಫೋನ್ ನಲ್ಲಿ ಮಾತುಕತೆ ನಡೆಸಿದ್ದ ಆಡಿಯೋ ಇದಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸ್ವತಃ ಸಚಿವರು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಆಡಿಯೋ ಫೇಕ್ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಕೂಡಾ ಸಚಿವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ವಿವರ ಇಲ್ಲಿದೆ. ಉನ್ನತ ಶಿಕ್ಷಣ ಸಚಿವ ಡಾ.
ಕಾನೂನು ಕೈಗೆತ್ತಿಕೊಳ್ಳಬೇಡಿ, ಸಹಕಾರ ಕೊಡಿ: ಬಾಗಲಕೋಟೆ ಜನರಿಗೆ ಜಿ ಪರಮೇಶ್ವರ್ ಮನವಿ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•21 Feb 2026, 1:08 pm IST ಬಾಗಲಕೋಟೆಯಲ್ಲಿ ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಹೆಚ್ಚುವರಿ ಪೊಲೀಸ್ ಬಲವನ್ನು ನಿಯೋಜನೆ ಮಾಡಲಾಗಿದೆ. ಶಾಂತಿ ಸಭೆಗೆ ಪ್ರಮುಖರು ಗೈರಾಗಿದ್ದಾರೆ. ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು. ಯಾರೂ ಕೂಡಾ ಕಾನೂನು ಕೈಗೆತ್ತಿಕೊಳ್ಳಬಾರದು ಹಾಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಮತ್ತಷ್ಟು ವಿವರ ಇಲ್ಲಿದೆ.
ಸಿದ್ದು ಷಡ್ಯಂತ್ರದ ಟ್ವೀಟ್ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಗರಿಗೆದರಿದ ಬೆಳವಣಿಗೆ, ವರ್ಕೌಟ್ ಆಗ್ತಿದ್ಯಾ ಡಿಕೆಶಿ ದೆಹಲಿ ದಂಡಯಾತ್ರೆ!
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•21 Feb 2026, 12:07 pm IST ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಗೊಂದಲದ ನಡುವೆ ಸಿಎಂ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಸಿದ್ದರಾಮಯ್ಯ ಟ್ವೀಟ್ ಹೇಳಿಕೆಯ ಅಸಲಿ ಟಾರ್ಗೆಟ್ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಣ ಕೂಡಾ ಸಕ್ರಿಯವಾಗುತ್ತಿದೆ. ಡಿಕೆ ಶಿವಕುಮಾರ್ ಪದೇ ಪದೇ ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ನಾಯಕರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ.
ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾದ ಬಾಗಲಕೋಟೆ ಸಂಘರ್ಷ: ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•20 Feb 2026, 9:08 pm IST ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಘಟನೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಟಾಪಟಿಗೆ ಕಾರಣವಾಗುತ್ತಿದೆ. ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಒಂದು ವರ್ಗದ ತುಷ್ಟೀಕರಣ ನೀತಿಯೇ ಗಲಭೆಗೆ ಕಾರಣ ಎಂದು ಆರೋಪ ಮಾಡಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಬಿಜೆಪಿಯ ಹಲವು ನಾಯಕರು ಈ ಕುರತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಬಾಗಲಕೋಟೆ ಘಟನೆ ಯಾವ ರೀತಿಯಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿದೆ? ಮತ್ತಷ್ಟು ವಿವರ ಇಲ್ಲಿದೆ.
ಆರೋಗ್ಯ ಇಲಾಖೆಯಿಂದ ಮಹತ್ವದ ಹೆಜ್ಜೆ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿಗೆ ಸಿಗಲಿದೆ ಚಾಲನೆ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•20 Feb 2026, 8:30 pm IST ಆರೋಗ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೇಮಕಾತಿಗೆ ಚಾಲನೆ ಸಿಗಲಿದೆ. ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ರಾಜ್ಯದ ಆರೋಗ್ಯ ಇಲಾಖೆ ಇತಿಹಾಸದಲ್ಲಿ ಈ ಹಿಂದೆ ಎಂದೂ ಕಾಣದ ವೇಗದಲ್ಲಿ ನೇಮಕಾತಿ ಆದೇಶವನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತಾಗಿ ಮಾತನಾಡಿದ ಅವರು ವಿವರಗಳನ್ನು ನೀಡಿದ್ದಾರೆ.
ಸಂಪೂರ್ಣ ಸರಳ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆಗೆ ಸರ್ಕಾರದ ಹೆಜ್ಜೆ! ಏನಿದು ಯುಎಲ್ಎಂಎಸ್
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•20 Feb 2026, 7:57 pm IST ಅನೇಕರಿಗೆ ಭೂ ಮಾಲಿಕತ್ವದ ವ್ಯವಸ್ಥೆ ಆರ್ಥಿಕ ಶಕ್ತಿಮತ್ತು ನೆಮ್ಮದಿ ನೀಡುವುದರ ಬದಲಿಗೆ ಗೊಂದಲ, ಅನಿಶ್ಚಿತತೆ, ವ್ಯಾಜ್ಯಗಳು ಗೂಡಾಗಿ ಪರಿಣಮಿಸಿದೆ. ಹಾಲಿ ವ್ಯವಸ್ಥೆ ಆಸ್ತಿಗಳಆರ್ಥಿಕ ಮೌಲ್ಯ, ಆದಾಯ, ಉತ್ಪಾದನೆಯನ್ನು ತಗ್ಗಿಸುತ್ತಿದೆ.ಜನಗಳಿಗೆ ನೆಮ್ಮದಿಯಿಲ್ಲ ಮತ್ತು ಸಮಾಜಕ್ಕೆ ಲಾಭವಿಲ್ಲ. ದೇಶದ ನ್ಯಾಯಾಲಯಗಳಲ್ಲಿರುವ ಶೇ. 50ಕ್ಕೂ ಹೆಚ್ಚು ವ್ಯಾಜ್ಯಗಳು ಭೂಮಿ/ಮಾಲಿಕತ್ವ ಸಂಬಂಧಿಸಿದವುಗಳು. ಈ ಭೂವ್ಯಾಜ್ಯಗಳಿಂದ ಮತ್ತು ಅನಿಶ್ಚಿತತೆಯಿಂದ ನಾವು ಭೂ ಗ್ಯಾರಂಟಿಯಡಿಗೆ ಸಾಗಲು ULMS ಪರಿಣಾಮಕಾರಿ ಮಾರ್ಗವಾಗಲಿದೆ.
Explain: ಶಾಲಿನಿ ರಜನೀಶ್ ವಿರುದ್ಧ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಬಂಧನ, ಇನ್ ಸೈಡ್ ಮಾಹಿತಿ ಏನೇನು?
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•20 Feb 2026, 6:40 pm IST ಮುಡಾದಲ್ಲಿ ಸೈಟ್ ಪಡೆದುಕೊಂಡ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿದಂತೆ ನಾಲ್ವರ ವಿರುದ್ದ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಬಂಧನ ಆಗಿದೆ. ಸಿಸಿಬಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸ್ನೇಹಮಯಿ ಕೃಷ್ಣ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆದರೆ ಇದಕ್ಕೆ ಶಾಲಿನಿ ರಜನೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಬಂಧನ ಆಗಿದೆ.
8 ಲಕ್ಷ ಸಾಲ ತೀರಿಸಲು ಪಕ್ಕದ ಮನೆಯ ವೃದ್ದೆಯ ಚಿನ್ನಾಭರಣ ಕದ್ದು ಕೊಲೆ: ಆರೋಪಿ ಸೆರೆ ಸಿಕ್ಕಿದ್ದು ಹೇಗೆ?
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•20 Feb 2026, 4:14 pm IST ಸಾಲ ತೀರಿಸಲು ದುಡ್ಡು ಹೋಂದಿಸುವ ಉದ್ದೇಶದಿಂದ ಪಕ್ಕದ ಮನೆಯ ವೃದ್ದೆಯನ್ನು ಕತ್ತು ಸೀಳಿ ಕೊಲೆ ಮಾಡಿದ ಅರೋಪಿ ಕೊನೆಗೂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಬೆಂಗಳೂರಿನ ನೆಲಮಂಗಲದ ಪಟ್ಟಣ ಬೀದಿಯ ಸಮೀಪ ಈ ಘಟನೆ ನಡೆದಿತ್ತು. ಶೋಭಾ ಎಂಬ 70 ವರ್ಷ ವಯಸ್ಸಿನ ವೃದ್ದೆಯನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಪಕ್ಕದ ಮನೆಯ ಶಿವಕುಮಾರ್ ಎಂಬಾತ ಈ ಕೃತ್ಯ ಎಸಗಿದ್ದ. ಕೊಲೆ ಮಾಡಿ ಏನೂ ತಿಳಿಯದಂತೆ ವರ್ತಿಸಿದ್ದ. ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೃತ್ಯ ಬಯಲಾಗಿದೆ.
ಬಾಗಲಕೋಟೆ ಉದ್ವಿಗ್ನ: ಘಟನೆಗೆ ಕಾರಣ ಏನು, ಸದ್ಯದ ಪರಿಸ್ಥಿತಿ ಹೇಗಿದೆ? ಸರ್ಕಾರದ ಎಚ್ಚರಿಕೆ ಕ್ರಮಗಳೇನು
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•20 Feb 2026, 3:03 pm IST ಶಿವಾಜಿ ಜಯಂತಿಯ ಮೆರವಣಿಗೆ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ನಡೆದ ಅಹಿತರ ಘಟನೆ ಇದೀಗ ರಾಜ್ಯದ ಗಮನ ಸೆಳೆದಿದೆ. ರಾಜಕೀಯ ಆರೋಪ ಪ್ರತ್ಯಾರೋಪಕ್ಕೂ ಇದು ಕಾರಣವಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಕಿಡಿಗೇಡಿಗಳಿಗೆ ಸೂಕ್ತ ಕಾನೂನಿನ ಶಿಕ್ಷೆ ನೀಡುವಂತೆ ಸೂಚಿಸಿದ್ದಾರೆ. ಹಾಗಾದರೆ ಬಾಗಲಕೋಟೆಯಲ್ಲಿ ನಡೆದ ಘಟನೆ ಏನು? ಘಟನೆಗೆ ಕಾರಣ ಏನು ಹಾಗೂ ಸದ್ಯದ ಪರಿಸ್ಥಿತಿ ಹೇಗಿದೆ? ಯಾವ ರೀತಿಯಲ್ಲಿ ರಾಜಕೀಯ ನಾಯಕರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಜೀವ ವರ್ಸಸ್ ಜೀವನ: ಸಫಾರಿ ಬಗ್ಗೆ ರೆಸಾರ್ಟ್ ಮಾಲೀಕರು ಹಾಗೂ ರೈತರ ಸಂಘರ್ಷ, ಬಂಡೀಪುರ ಬಿಕ್ಕಟ್ಟಿಗೆ ಪರಿಹಾರ ಏನು
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•20 Feb 2026, 1:08 pm IST ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿದೆ. ಸಫಾರಿಗೆ ಅನುಮತಿ ನೀಡಿದ್ದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ರೆಸಾರ್ಟ್ ಮಾಲೀಕರು ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದಾರೆ. ಹೀಗಾಗಿ ಬಂಡೀಪುರದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಈ ಬಿಕ್ಕಟ್ಟಿಗೆ ಅರಣ್ಯ ಇಲಾಖೆ ಏನು ಕ್ರಮಗಳನ್ನು ಕೈಗೊಳ್ಳಲಿದೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಫಾರಿ ಮುಂದುವರಿಯುತ್ತಾ? ಅಥವಾ ಸರ್ಕಾರ ಪರ್ಯಾಯ ಕ್ರಮಗಳನ್ನು ಕೈಗೊಳ್ಳುತ್ತಾ?
ಟಾರ್ಗೆಟ್ 2028:ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪ್ಲ್ಯಾನ್, ಕಾರ್ಯಕಾರಿಣಿ ಸಭೆಯಲ್ಲಿ ಗಂಭೀರ ಚರ್ಚೆ
Edited by: ಇರ್ಷಾದ್ ಉಪ್ಪಿನಂಗಡಿ|Vijaya Karnataka Web•19 Feb 2026, 6:40 pm IST ಟಾರ್ಗೆಟ್ 2028ಕ್ಕೆ ಬಿಜೆಪಿ ಸಜ್ಜಾಗಿದೆ. ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆದಿದೆ. ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷ ಸಂಘಟನೆ, ಚುನಾವಣಾ ತಂತ್ರಗಾರಿಕೆ ಸೇರಿದಂತೆ ಪ್ರಮುಖ ವಿಚಾರಗಳ ಕುರಿತಾಗಿ ಗಂಭೀರ ಸ್ವರೂಪದ ಚರ್ಚೆ ಆಗಿದೆ.
Show More
loading
Actions
Is this you?
As a journalist, you can create a free Muck Rack account to customize your profile, list your contact preferences, and upload a portfolio of your best work.Get in touch with Mohammad
Contact Mohammad, search articles and posts on X, monitor coverage, and track replies from one place.
Learn more about Muck Rack